ಅರಕಲಗೂಡು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನ ಮುಂಭಾಗದ ಚಕ್ರಕಳಚಿ ಬಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲ್ಲೂಕಿನ ದೊಡ್ಡಮಗ್ಗೆ ಬಳಿ ಶನಿವಾರ ಸಂಜೆ 6 ಗಂಟೆ ಸಮಯದಲ್ಲಿ ಸಂಭವಿಸಿದೆ.
ಕೊಣನೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ವಾಹನದ ಮುಂಭಾಗದ ಚಕ್ರ ದೀಡೀರ್ ಕಳಚಿಕೊಂಡಿತು. ಕೂಡಲೆ ಪರಿಸ್ಥಿತಿಯನ್ನು ಅರಿತ ಚಾಲಕ ನವೀನ್ ವಾಹನವನ್ನು ನಿಯಂತ್ರಿಸಿ ನಿಲುಗಡೆಮಾಡುವಲ್ಲಿ ಯಶಸ್ವಿಯಾದರು.
ಹೀಗಾಗಿ ಬಸ್ನೊಳಗೆ ಇದ್ದ 22 ಮಂದಿ ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೆ ಪಾರಾದರು.
ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು
No comments:
Post a Comment