ಹೊಳೆನರಸೀಪುರ: ಡಿಪ್ಲೋಮ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಡಿಪ್ಲೋಮ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಹೊಳೆನರಸೀಪುರ ಪಟ್ಟಣದ ಚನ್ನರಾಯಪಟ್ಟಣ ರಸ್ತೆಯಲ್ಲಿರುವ  ಸರ್ಕಾರಿ ಪಾಲಿಟೆಕ್ನಿಕ್ ನ, 2020 - 21 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮ ಕೋರ್ಸ್‌ಗಳ ಪ್ರವೇಶಕ್ಕೆ ಎಸ್.ಎಸ್. ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಶೇಕಡಾ 35 ರಷ್ಟು ಅಂಕಗಳಿಸಿದ ಅಭ್ಯರ್ಥಿಗಳಿಂದ ಆನ್ ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಡಿಪ್ಲೋಮ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು www.dtek.karnataka.gov.in  ವೆಬ್ ಸೈಟ್ ಮೂಲ ಅರ್ಜಿ ಸಲ್ಲಿಸಬಹುದು ಅಥವಾ ಸರ್ಕಾರಿ ಪಾಲಿಟೆಕ್ನಿಕ್, ಹೊಳೆನರಸೀಪುರ ಇಲ್ಲಿ ಉಪನ್ಯಾಸಕರ ಸಹಾಯದೊಂದಿಗೆ ಆನ್‍ಲೈನ್‍ನಲ್ಲಿ ತಮ್ಮ ಇಚ್ಚೆಗನುಗುಣವಾಗಿ Option entry ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆ.22 ರಂದು  ಕೊನೆಯ ದಿನ ಆಗಿರುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಂಶುಪಾಲರನ್ನು ಕಚೇರಿ ವೇಳೆ ಭೇಟಿ ಮಾಡಬಹುದು ಎಂದು ಪ್ರಾಂಶುಪಾಲರಾದ ಶ್ರೀ ಪಾಂಡುರಂಗ ವಿಠ್ಠಲ ಆರ್ ರವರು ತಿಳಿಸಿದ್ದಾರೆ.

No comments:

Post a Comment