ಅರಕಲಗೂಡು ಬ್ರೇಕಿಂಗ್ ನ್ಯೂಸ್
ಕೊಣನೂರು: :ನಮ್ಮ ದೇಶದ ಗಡಿ ಕಾಯುವ ಯೋಧರಷ್ಟೇ 130 ಕೋಟಿ ಜನರ ಆರೋಗ್ಯಕ್ಕಾಗಿ ಶ್ರಮವಹಿಸಿ.
ಕೊಣನೂರು: :ನಮ್ಮ ದೇಶದ ಗಡಿ ಕಾಯುವ ಯೋಧರಷ್ಟೇ 130 ಕೋಟಿ ಜನರ ಆರೋಗ್ಯಕ್ಕಾಗಿ ಶ್ರಮವಹಿಸಿ ಮಹಾಮಾರಿ ಕೊರೊನಾ ವೈರಸ್ ಸೋಂಕು ತಡೆಗೆ ತಮ್ಮ ಪ್ರಾಣ ಒತ್ತೆ ಇಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಕರೊನಾ ವಾರಿಯರ್ಸ್ ಗಳಿಗೆ ಅಭಿನಂದಿಸುವ ಮೂಲಕ ಅವರ ಆತ್ಮ ಸ್ಥೈರ್ಯ ಮತ್ತಷ್ಟು ಬಲಗೊಳಿಸಲಾಗುತ್ತಿದೆ ಎಂದು ಮಾಜಿ ಸಚಿವರಾದ ಎ.ಮಂಜು ತಿಳಿಸಿದರು.
ರಾಮನಾಥಪುರದ ಸಂಕ್ರಾಂತಿ ಕಲ್ಯಾಣ ಮಂಟಪದಲ್ಲಿ ಮಾಜಿ ಸಚಿವ ಎ.ಮಂಜು ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೋಬಳಿಯ ಕೊರೋನಾ ವಾರಿಯರ್ಸ್ ಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲೇ ಮಹಾಮಾರಿ ವೈರಸ್ ಹರಡಿದೆ. ಸಾರ್ವಜನಿಕರು ಸಹ ಆರೋಗ್ಯ ಇಲಾಖೆಯವರು ನೀಡುವ ನಿರ್ದೇಶನಗಳನ್ನು ಪಾಲಿಸಿಕೊಂಡು ಹೋಗಬೇಕು. ಕೊರೋನಾ ವೈರಸ್ ಬಗ್ಗೆ ಭಯ ಪಡದೆ ಎಚ್ಚರಿಕೆಯಿಂದ ಇದ್ದರೆ ಅದನ್ನು ತಡೆಗಟ್ಟಲು ಸಾಧ್ಯ. ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಾವುಗಳು ಈ ಕೊರೋನಾ ವಾರಿಯರ್ಸ್ ಗಳ ಶ್ರಮಕ್ಕೆ ಜೊತೆ ಕೊಡಬೇಕಾಗಿದೆ. ತಮ್ಮ ಕುಟುಂಬದ ಸದಸ್ಯರುಗಳಿಂದ ದೂರವಿದ್ದು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರದ್ದು ಸಹ ಸಮಾನ ಜವಾಬ್ದಾರಿ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಮನಾಥಪುರ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಡಾ.ಮಂಥರ್‌ಗೌಡರವರು ಮಾತನಾಡಿ, ಕೊವಿಡ್-19 ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರ ರಕ್ಷಣೆ ಮಾಡುವ ಕೆಲಸವನ್ನು ನಿರಂತರ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಂತಹ ಕಠಿಣ ಪರಿಸ್ಥಿತಿ ಎದುರಾದರು ನಾವು ವೈರಸ್ ಅನ್ನು ತಡೆಗಟ್ಟಲು ಶ್ರಮಿಸುತ್ತೇವೆ. ನಮ್ಮ ಕ್ಷೇತ್ರದ ಕೊರೋನಾ ವಾರಿಯರ್ಸ್ ತಂಡ ಅದನ್ನು ಮಟ್ಟ ಹಾಕಲು ಸಮರ್ಥರಿದ್ದಾರೆ. ಸಾರ್ವಜನಿಕರು ಸಹ ಸಹಕಾರ ನೀಡಬೇಕೆಂದು ನುಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರೇವಣ್ಣ, ತಾಲ್ಲೂಕು ಪಂಚಾಯತ್ ಸದಸ್ಯರು, ಎ.ಮಂಜು ಅಭಿಮಾನಿ ಬಳಗದವರು, ಮುಖಂಡರು, ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ್ , ಕಂದಾಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ: ಜ಼ಮೀರ್ ಅಹಮದ್ ಕೊಣನೂರು
No comments:
Post a Comment