ಸಾಮೂಹಿಕ ಪ್ರತಿಜ್ಞೆ ಮೂಲಕ ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಕರೆ: ಜಾವಗಲ್ ಮಂಜುನಾಥ್

ಕೆಪಿಸಿಸಿ ತಂಡದವರು ತಾಲ್ಲೂಕಿನಾದ್ಯಂತ ಭೇಟಿ:
 
ಅರಕಲಗೂಡು: ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶ್ರಮಿಸಲಾಗವುದು. ಜುಲೈ 2 ನೇ ತಾರೀಖಿನಂದು ಪ್ರತಿಜ್ಞಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ತಾಲ್ಲೂಕಿನ ಪ್ರತೀ ಬೂತ್ ಮಟ್ಟದಲ್ಲೂ ಸಿದ್ಧತೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವಗಲ್ ಮಂಜುನಾಥ್ ತಿಳಿಸಿದರು.

 
ಪಟ್ಟಣದ ಪರಿವೀಕ್ಷಣ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕಿನ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಇದೇ ಜುಲೈ 2ಕ್ಕೆ ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ರವರು ಅಧಿಕಾರ ಸ್ವೀಕರಿಸುತ್ತಿದ್ದು, ಅಂದಿನ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಭಾಗದಿಂದ ಲಕ್ಷಾಂತರ ಕಾರ್ಯಕರ್ತರು ಪ್ರತಿಜ್ಞೆಯನ್ನು ಸ್ವೀಕರಿಸಲಿದ್ದಾರೆ. 


ದೇಶದ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಿಷ್ಠಾವಂತ ಕಾರ್ಯಕರ್ತರು ಹೊಸ ಉತ್ಸಾಹದೊಂದಿಗೆ ಶ್ರಮಿಸಲಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲೂ ಸಹ ಪಕ್ಷವನ್ನು ಸಧೃಡಗೊಳಿಸುವ ಸಂಕಲ್ಪ ಮಾಡುತ್ತೇವೆ ಎಂದು ನುಡಿದರು.

ಅರಕಲಗೂಡು ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾತನಾಡಿ, ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಜುಲೈ ೨ ರ ಗುರುವಾರದಂದು ಪ್ರತಿಜ್ಞಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ವೀಕ್ಷಣೆ ಮಾಡಿ,  ಕಾರ್ಯಕರ್ತರುಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಸಮಾಜದಲ್ಲಿ ಸೌಹಾರ್ದತೆ ಮೂಡಿಸಲು, ಪಕ್ಷದ ಸಂವಿಧಾನ, ತತ್ವ-ಸಿದ್ದಾಂತ-ಜಾತ್ಯತೀತ ನಿಲುವು ಮತ್ತು ಸಾಮಾಜಿಕ ನ್ಯಾಯಗಳನ್ನು ಜಾರಿಗೆ ತರಲು ರಾಜ್ಯಮಟ್ಟದ ನಾಯಕರುಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.
 ಅವರ ಜೊತೆಗೆ ನಾವೆಲ್ಲರೂ ಕೈಜೋಡಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಿಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ತಾಲ್ಲೂಕಿನಲ್ಲಿ ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದೆ ಸಾಮಾನ್ಯ ಕಾರ್ಯಕರ್ತರೂ ಸಹ ಎಲ್ಲರಷ್ಟೇ ಸರಿ ಸಮಾನವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ತಿಳಿಸಿದರು.
 
ಅರಕಲಗೂಡು ತಾಲ್ಲೂಕಿನ ಕಾಂಗ್ರೆಸ್ ಉಸ್ತುವಾರಿಗಳಾದ ಎಂ.ಕೆ. ಶೇಷೇಗೌಡ, ತಾಲ್ಲೂಕಿನ ಮುಖಂಡ ಗಶೇಣ್ ವೇಲಾಪುರಿ, ಅರಕಲಗೂಡು ತಾಲ್ಲೂಕಿನ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ರಾಜೇಂದ್ರ, ಅಲ್ಪಸಂಖ್ಯಾತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಾಬಾಜ಼್, ಕಾಂಗ್ರೆಸ್‌ನ ಯುವ ಮುಖಂಡ ಜಮೀರ್ ಪಾಷ, ಯುವ ಮುಖಂಡ ಫಾಜಿಲ್ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಜಮೀರ್ ಅಹಮದ್ ಕೊಣನೂರು

No comments:

Post a Comment