ಅರಕಲಗೂಡು ತಾಲ್ಲೂಕು ಆಶಾ ಕಾರ್ಯಕರ್ತೆಯ ಸಂಘದ ಅಧ್ಯಕ್ಷರಾದ ಮಂಜುಳ ನೇತೃತ್ವದಲ್ಲಿ 12000 ಮಾಸಿಕ ವೇತನ ನಿಗದಿಪಡಿಸಿ ಅವಶ್ಯಕ ರಕ್ಷಣಾ ಸಾಮಾಗ್ರಿಗಳನ್ನು ನೀಡಬೇಕೆಂದು ಆಗ್ರಹಿಸಿ ತಾಲ್ಲೂಕ್ ಕಛೇರಿ ಮುಂದೆ ಕುಳಿತು ಪ್ರತಿಭಟನೆ ನೆಡಸಿದರು.
ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆ ಯ ಅಧ್ಯಕ್ಷರಾದ ಮಂಜುಳಾ ಮಾತನಾಡಿ ನಾವು ದಿನಾಂಕ 29-6-2020 ರಿಂದ ಇಲ್ಲಿಯವರೆಗೆ ಪ್ರತಿಭಟನೆ ಮಾಡಿಕೊಂಡು ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಕೊಡುವುದರ ಮೂಲಕ ಗಮನ ಸೆಳೆದಿದ್ದೇವೆ ಆದರೂ ಕೂಡ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ ನಮಗೆ 12000 ಸಂಭಳ ನಿಗದಿಮಾಡಬೇಕು.
ಕೊರೋನಾ ಹರಡದಂತೆ ಉತ್ಕ್ರಷ್ಟ ದರ್ಜೆಯ ಮಾಸ್ಕ್ ಸ್ಯಾನಿಟೈಸರ್, ಕೈಗವಸ ಕಿಟ್ ನೀಡಬೇಕು ಎಂದು ಕೇಳಿಕೊಂಡರು.
ಅರಕಲಗೂಡು ಬ್ರೇಕಿಂಗ್ ನ್ಯೂಸ್
ರವಿಕುಮಾರ್ ದುಮ್ಮಿ
No comments:
Post a Comment