– ಸರ್ಕಾರದಿಂದ ಲಾಕ್‍ಡೌನ್ ಹೊಸ ಮಾರ್ಗಸೂಚಿ ಪ್ರಕಟ
– ಆಗಸ್ಟ್ 1 ರಿಂದ ಜಾರಿ
ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ಸಲುವಾಗಿ ಲಾಕ್‍ಡೌನ್‍ನಲ್ಲಿ ಮತ್ತಷ್ಟು ಸಡಿಲಿಕೆ ಮಾಡಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದೆ. ಆಗಸ್ಟ್ 1ರಿಂದ ಅನ್‍ಲಾಕ್ 3 ಜಾರಿಗೆ ಬರ್ತಿದ್ದು, ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಒಂದಷ್ಟು ಮಾರ್ಗಸೂಚಿ ಪ್ರಕಟಿಸಿದೆ.
ಯಾವುದಕ್ಕೆ ರಿಲ್ಯಾಕ್ಸ್..?
* ಆಗಸ್ಟ್ 1ರಿಂದಲೇ ನೈಟ್ ಕರ್ಫ್ಯೂ ರದ್ದು.
* ಆಗಸ್ಟ್ 5ರಿಂದ ಯೋಗ ಕ್ಲಾಸ್, ಜಿಮ್ ಓಪನ್.
* ಸಾಮಾಜಿಕ ಅಂತರದೊಂದಿಗೆ ಸ್ವಾತಂತ್ರ್ಯೋತ್ಸವ ಆಚರಣೆ.
* ವಂದೇ ಭಾರತ್ ಮಿಷನ್ ಅಡಿ ಅಂತಾರಾಷ್ಟ್ರೀಯ ವಿಮಾನಗಳ ನಿಯಮಿತ ಸಂಚಾರ.
ಯಾವುದಕ್ಕೆ ನಿರ್ಬಂಧ ಮುಂದುವರಿಕೆ
* ಆಗಸ್ಟ್ 31ರವರೆಗೆ ಶಾಲೆ, ಕಾಲೇಜು, ತರಬೇತಿ ಸಂಸ್ಥೆಗಳು.
* ಮೆಟ್ರೋ ರೈಲು, ಥಿಯೇಟರ್, ಸ್ವಿಮಿಂಗ್ ಪೂಲ್.
* ಬಾರ್, ಆಡಿಟೋರಿಯಂ, ಮನರಂಜನಾ ಪಾರ್ಕ್‍ಗಳು.
* ಸಾಮಾಜಿಕ/ರಾಜಕೀಯ/ಧಾರ್ಮಿಕ/ಕ್ರೀಡೆ/ಮನರಂಜನೆ ಕಾರ್ಯಕ್ರಮಗಳು.
* ಕಂಟೈನ್ಮೆಂಟ್ ಝೋನ್‍ಗಳಲ್ಲಿ ಮತ್ತಷ್ಟು ನಿಗಾ, ಕಠಿಣ ನಿರ್ಬಂಧ.
ಇವೆಲ್ಲವುಗಳ ಓಪನ್‍ಗೆ ರಾಜ್ಯಗಳೊಂದಿಗೆ ಮತ್ತಷ್ಟು ಗಂಭೀರ ಚರ್ಚೆ ಅಗತ್ಯವಿದೆ ಅಂತ ಗೃಹ ಸಚಿವಾಲಯ ಹೇಳಿದೆ. ರಾಜ್ಯದಲ್ಲೂ ಕೇಂದ್ರದ ಮಾರ್ಗಸೂಚಿಯೇ ಅನ್ವಯ ಆಗಲಿದೆ.
No comments:
Post a Comment