ಅರಕಲಗೂಡು ಪಟ್ಟಣದ ಬಸವನಗುಡಿ ಬೀದಿ ಸೀಲ್ ಡೌನ್.

ಅರಕಲಗೂಡು:ಪಟ್ಟಣದ ಬಸವನಗುಡಿ ಬೀದಿಯನ್ನು ಇಂದು ಸೀಲ್ ಡೌನ್ ಮಾಡಲಾಯಿತು. ಡಯಾಲಿಸಿಗಾಗಿ ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದ 75 ವರ್ಷದ ವೃದ್ದರಿಗೆ ಇಂದು ಕೊರೊನ ಪಾಸಿಟಿವ್ ದೃಡ ಪಟ್ಟ ಹಿನ್ನಲೆಯಲ್ಲಿ ವೃದ್ದರು ವಾಸವಿದ್ದ ಬಸವನಗುಡಿ ರಸ್ತೆಯನ್ನು ಅರೋಗ್ಯ ಇಲಾಖೆ ಮತ್ತು ಪಟ್ಟಣ ಪಂಚಾಯತಿ ಅಧಿಕಾರಿಗಳು ಸೀಲ್ ಡೌನ್  ಮಾಡಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅರೋಗ್ಯಾಧಿಕಾರಿ ಸ್ವಾಮಿಗೌಡರು ವೃದ್ದರು ಅರೋಗ್ಯ ತಪಾಸಣೆಗೆಂದು ಹಾಸನದ ಖಾಸಗಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿಯ ಡಾಕ್ಟರ್ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿ ಪಾಸಿಟಿವ್ ದೃಡ ಪಟ್ಟಿದೆ,ಇನ್ನೊಂದು ಕೇಸ್ ಮರವಲಲು ಗ್ರಾಮದವಾರಾಗಿದ್ದು ಅವರು ಬೆಂಗಳೂರಿನಿಂದ ಹಿಂದಿರುಗಿದ್ದು ಹಾಸನದ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರಿಗೂ ಸಹ ಕೊರೋನ ಪಾಸಿಟಿವ್ ಇದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಅರೋಗ್ಯ ನೀರಿಕ್ಷಿತರಾದ ಚಂದ್ರೇಗೌಡ,ಜಯರಾಂ, ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಜರಿದ್ದರು.

ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು

No comments:

Post a Comment