ಕೊರೊನಾ ವಾರಿಯರ್ಸ್‌ಗಳಿಗೆ ಹಾಲಿನ ಬಾಟೆಲ್ ವಿತರಣೆ ಮಾಡಿದ :ವಿ.ಎ ನಂಜುಂಡ ಸ್ವಾಮಿ.

ಅರಕಲಗೂಡು:  ಕೋವಿಡ್  -19 ಸಂಕಷ್ಟದ ಸಮಯದಲ್ಲಿ ಕೊರೊನಾ ವಾರಿಯರ್ಸ್ ಆಗಿಸೇವೆ ಸಲ್ಲಿಸುತ್ತಿರುವ   ಆರೋಗ್ಯ, ಪೊಲೀಸ್ ಹಾಗೂ ಕಂದಾಯ  ಇಲಾಖೆ ನೌಕರರರು ಮತ್ತು ಆಶಾ ಕಾರ್ಯಕರ್ತೆಯರಿಗೆ  ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುವಂತೆ   ಆರೋಗ್ಯದಾಯಕ ಹಾಲನ್ನು ವಿತರಿಸಲಾಗುತ್ತಿದೆ ಎಂದು ರೆಡ್ ಕ್ರಾಸ್ ತಾಲ್ಲೂಕು ಘಟಕದ  ಉಪಸಭಾಪತಿ ವಿ.ಎ.ನಂಜುಂಡ ಸ್ವಾಮಿ ತಿಳಿಸಿದರು. 


ಪಟ್ಟಣದ ಪೊಲೀಸ್ ಆರೋಗ್ಯ, ಪೊಲೀಸ್ ಹಾಗೂ ಕಂದಾಯ  ಇಲಾಖೆ ನೌಕರರಿಗೆ ಹಾಲಿನ ಬಾಟಲಿಗಳನ್ನು ವಿತರಿಸಿ ಮಾತನಾಡಿದ  ಅವರು,  ಸಂಕಷ್ಟದ  ಇಂದಿನ ದಿನಗಳಲ್ಲಿ  ಈ  ಇಲಾಖೆಗಳ ನೌಕರರ ಸೇವೆ ಅತ್ಯಂತ ಶ್ಲಾಘನೀಯವಾಗಿದೆ. ಇವರ  ಆರೋಗ್ಯದ ರಕ್ಷಣೆಯ ಹೊಣೆ  ಸಮಾಜದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ  ಹಾಲನ ವಿತರಣೆ ನಡೆಸುತ್ತಿದೆ ಎಂದರು. 

ತಹಶೀಲ್ದಾರ್ ರೇಣುಕುಮಾರ್, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ಸತೀಶ್, ರೆಡ್ ಕ್ರಾಸ್ ತಾಲ್ಲೂಕು ಘಟಕದ ಕಾರ್ಯದರ್ಶಿ  ಶಾಂತಕುಮಾರ್, ನಿರ್ದೇಶಕರಾದ ಪುನಾರಾಮ್ ವಿರೂಪಾಕ್ಷ ಉಪಸ್ಥಿತರಿದ್ದರು.

No comments:

Post a Comment