ಅರಕಲಗೂಡು ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಸರಿತಾರಾಮು ಇಂದು ಆಯ್ಕೆ.

ಅರಕಲಗೂಡು ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಸರಿತಾರಾಮು ಇಂದು ಆಯ್ಕೆ.

ಇಂದು  ಬೆಳ್ಳಿಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ  ಅರಕಲಗೂಡು ತಾಲ್ಲೂಕ್ ಪಂಚಾಯತಿ ಅಧ್ಯಕ್ಷರ ಚುನಾವಣೆಯು  ಚುನಾವಣಾ ಅಧಿಕಾರಿ  ಸಕಲೇಶಪುರದ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ರವರ ನೇತೃತ್ವದಲ್ಲಿ ಅರಕಲಗೂಡು ತಾಲ್ಲೂಕ್ ಪಂಚಾಯತಿ ಸಭಾಂಗಣದಲ್ಲಿ  ನಡೆಸಲಾಯಿತು.


 
ತಾಲ್ಲೂಕ್ ಪಂಚಾಯತಿಯಲ್ಲಿ  ಓಟ್ಟು 19  ಸದಸ್ಯರ  ಸ್ಥಾನ ಗಳಿದ್ದು ಕಾಂಗ್ರೆಸ್11, ಜೆಡಿಸ್ 7 , ಬಿಜೆಪಿ 1. ಇದ್ದು,    14 ಸದಸ್ಯರು ಹಾಜರಿದ್ದರು.


  ಸಾಮಾನ್ಯ ಮಹಿಳೆ ಸ್ಥಾನವಾಗಿದ್ದು , ವಡ್ಡರಹಳ್ಳಿ ಕ್ಷೇತ್ರದ ಸರಿತಾರಾಮು ಅವಿರೋಧ ಆಯ್ಕೆಯಾಗಿರುತ್ತಾರೆ.

ಈ ಹಿಂದೆ ಅಧ್ಯಕ್ಷೆಯಾಗಿದ್ದ ವೀಣಾ ಮಂಜುನಾಥ್ ಇತ್ತೀಚೆಗೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷರಾಗಿದ್ದ ಎಸ್.ಆರ್. ನಾಗರಾಜ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ‌ ಸ್ವೀಕರಿದ್ದರು.


ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು

No comments:

Post a Comment