ಅರಕಲಗೂಡ: ತಾಲ್ಲೂಕಿನ ಅತ್ನಿ ಗ್ರಾಮದ ಮಲ್ಲೇಶ್ ಯು.ಎಂ ಎಂಬುವವರು ಅರುಣಾಚಲಪ್ರದೇಶದ ಬಾರ್ಡರ್ ನ ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇಂದು ಸಂಜೆ ವಿಧಿವಶರಾದ್ದದರೆ.
ಮಲ್ಲೇಶ್ ರವರ ಆತ್ಮಕ್ಕೆ ಶಾಂತಿ ಸಿಗಲಿ.
ಅರಕಲಗೂಡು ಬ್ರೇಕಿಂಗ್ ನ್ಯೂಸ್
ವರದಿ: ರವಿಕುಮಾರ್ ದುಮ್ಮಿ
ಅರಕಲಗೂಡು: ಅರುಣಾಚಲ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ವೇಳೆ ತಾಲ್ಲೂಕಿನ ಅತ್ನಿ ಗ್ರಾಮದ ಯೋಧ ಶನಿವಾರ ಮೃತರಾಗಿದ್ದಾರೆ.
ಮಲ್ಲೇಶ್ ಮೃತ ಯೋದರು. ಈ ಬಗ್ಗೆ ಸೈನ್ಯದವರಿಂದ ಕುಟುಂಬದವರಿಗೆ ಮಾಹಿತಿ ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಅವರು ಅತ್ನಿ ಗ್ರಾಮದ ದಿ| ಮಲ್ಲೇಗೌಡ ಪುಟ್ಟಮ್ಮ ದಂಪತಿಯ 5 ಮಕ್ಕಳ ಪೈಕಿ ಕೊನೆಯ ಮಗನಾಗಿದ್ದು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ.
17 ವರ್ಷಗಳಿಂದ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಮಲ್ಲೇಶ್ ಹೆಚ್ಚುವರಿ ಕರ್ತವ್ಯಕ್ಕೆ ಮರಳಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಇಡೀ ಗ್ರಾಮ ಮೌನದಲ್ಲಿ ಮುಳುಗಿದೆ. ಪಾರ್ಥಿವ ಶರೀರರವನ್ನು ಭಾನುವಾರ ಗ್ರಾಮಕ್ಕೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.
No comments:
Post a Comment