ಅರಕಲಗೂಡು ಬ್ರೇಕಿಂಗ್ ನ್ಯೂಸ್
ಅಂತಕದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಪೊಷಕರಿಗೆ ಬಿಗ್ ರಿಲೀಫ್.
ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ಪರೀಕ್ಷೆ ಕೇಂದ್ರದಲ್ಲಿ ಶನಿವಾರ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಯೊಬ್ಬನಿಗೆ ಕೊರೋನಾ ಸೋಂಕು ದೃಡಪಟ್ಟಿದ್ದ ಕಾರಣ, ಸೋಂಕಿತನ ಸಂಪರ್ಕದಲ್ಲಿದ 18 ವಿದ್ಯಾರ್ಥಿಗಳು ಮತ್ತು ಮೇಲ್ವಿಚಾರಣೆ ಕಾರ್ಯ ನಿರ್ವಹಿದ್ದ 1 ಶಿಕ್ಷಕರ ಗಂಟಲ ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು, ಇಂದು ಎಲ್ಲಾ ನೆಗಟಿವ್ ಬಂದಿದ್ದು ಅರಕಲಗೂಡು ಸೋಂಕಿತ ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಟ್ಟಿಗೆ ಪರೀಕ್ಷೆ ಬರೆದ ಪರೀಕ್ಷಾರ್ಥಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ನಿನ್ನೆ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಪರೀಕ್ಷಾ ಕೇಂದ್ರದ ಓರ್ವ ವಿದ್ಯಾರ್ಥಿಗೆ ಪಾಸಿಟಿವ್ ಬಂದಿತ್ತು.
ಸೊಂಕಿತ ವಿದ್ಯಾರ್ಥಿಯೊಟ್ಟಿಗೆ ಪರೀಕ್ಷೆ ಬರೆದಿದ್ದ 19 ವಿದ್ಯಾರ್ಥಿಗಳನ್ನು ಮುಂಜಾಗ್ರತಾ ಕ್ರಮವಾಗಿ ಎಲ್ಲ ವಿದ್ಯಾರ್ಥಿಗಳ ಗಂಟಲ ದ್ರವದ ಮಾದರಿ ಪರೀಕ್ಷೆ ಮಾಡಲಾಗಿತ್ತು ಪರೀಕ್ಷೆ ಆತಂಕದ ನಡುವೆ ಕೊರೋನಾ ಭಯ ಆವರಿಸಿತ್ತು.
ಜೊತೆಯಲ್ಲಿ ಪರೀಕ್ಷೆ ಬರೆದಿದ್ದ ಇತರ ಎಲ್ಲಾ ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದೆ.
ನೆಗಟಿವ್ ಬಂದ ಹಿನ್ಮೆಲೆ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟ ಶಿಕ್ಷಣ ಇಲಾಖೆ.
ಅಂತಕದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಪೊಷಕರಿಗೆ ಬಿಗ್ ರಿಲೀಫ್.
ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು
No comments:
Post a Comment