ಬಡವರಿಗೆ ಆಗದ ಗ್ರಾ.ಪಂ: ಹಣ ಕೊಟ್ಟು, ಅರ್ಜಿ ಸಲ್ಲಿಸಿ 4 ವರ್ಷ ಆದರೂ ಕ್ಯಾರೆ ಎನ್ನದ ಸದಸ್ಯರು, ಅಧಿಕಾರಿಗಳು..!

ಬಡವರಿಗೆ ಆಗದ ಗ್ರಾ.ಪಂ: ಹಣ ಕೊಟ್ಟು, ಅರ್ಜಿ ಸಲ್ಲಿಸಿ ೪ ವರ್ಷ ಆದರೂ ಕ್ಯಾರೆ ಎನ್ನದ ಸದಸ್ಯರು, ಅಧಿಕಾರಿಗಳು..!


ಅರಕಲಗೂಡು ತಾಲೂಕಿನ ಮೋಕಲಿ ಗ್ರಾಮ ಪಂಚಾಯತಿಯಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಬೇಕಾದರೆ ಹರ ಸಾಹಸ ಪಡಬೇಕು. ಯಾಕೆಂದರೆ ಈ ಗ್ರಾಮ ಪಂಚಾಯಿತಿಯು ಇರುವುದು ಹೆಸರಿಗೆ ಮಾತ್ರ ಆದರೆ ಇದು ಸಾರ್ವಜನಿಕರು, ಬಡವರ ಪಾಲಿಗೆ ಇಲ್ಲದಂತಾಗಿದೆ.
ಮೊಕಲಿ ಗ್ರಾಮದಲ್ಲಿ ವಾಸವಿರುವ ಅಪ್ಪಣ್ಣ ಎಂಬ ವ್ಯಕ್ತಿ ಸುಮಾರು ವರ್ಷದಿಂದ ಸರ್ಕಾರದಿಂದ ಸಿಗುವ ಪ್ರಧಾನ ಮಂತ್ರಿ ಯೋಜನೆ ಅಡಿಯಲ್ಲಿ ಮನೆ ಕೊಡಿ ಎಂದು ಫಲಾನುಭವಿಯಾಗಿ ಅರ್ಜಿಸಲ್ಲಿಸಿ ೪ ವರ್ಷ ಆದರೂ ಇವರಿಗೆ ಇನ್ನು ಮನೆ ದೊರೆತಿಲ್ಲ. ನನಗೆ ಪುಟ್ಟ ಮಗು ಇದೆ ಮಕ್ಕಳನ್ನು ಕಟ್ಟಿಕೊಂಡು ಈ ಮನೆಯಲ್ಲಿ ವಾಸ ಮಾಡಲು ಆಗುತ್ತಿಲ್ಲ, ಮನೆ ಅಂಚು ಹಾಗೂ ಗಳಗಳು ಮುರಿದು ಹೋಗುವ ಸ್ಥಿತಿಯಲ್ಲಿದೆ. ಮಳೆ ಬಂದರೆ ಇರಲು ಆಗುವುದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಹಣ ಕೊಟ್ಟಿದ್ದೇನೆ. ಆದರೆ ಇನ್ನು ನನಗೆ ಮನೆ ಮಾತ್ರ ಬಂದಿಲ್ಲ. ಕೇಳಲು ಹೋದರೆ ಉಡಾಫೆ ಉತ್ತರ ಕೊಡುತ್ತಾರೆ ಎಂದು ಮೊಕಲಿ ಗ್ರಾಮ ನಿವಾಸಿ ಅಪ್ಪಣ್ಣ ಆರೋಪ ಮಾಡಿದ್ದಾರೆ. ಈಗಲಾದರೂ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಎಚ್ಚೆತ್ತುಕೊಂಡು ಆ ಬಡಕುಟುಂಬಕ್ಕೆ ಮನೆಯನ್ನು ಒದಗಿಸಿ ಕೊಡುವರೇ ಎಂದು ಕಾದುನೋಡಬೇಕಿದೆ.?

ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು

No comments:

Post a Comment