೧೧ .೩೦ ರ ಸುಮಾರಿನಲ್ಲಿ ಪರೀಕ್ಷಾ ಫಲಿತಾಂಶವನ್ನು ನೋಡಿ ನಾಪಾಸ್ ಆಗಿರುವ ಕಾರಣಕ್ಕೆ ಆಕೆ ಮನನೊಂದಿದ್ದಳು.ಮದ್ಯಾನ್ನ ೧ ಗಂಟೆಯ ಸುಮಾರಿಗೆ ಮನೆಯಲ್ಲಿದ್ದ ಬೆಳೆ ಸಿಂಪಡಣೆಗಾಗಿ ಇರಿಸಲಾಗಿದ್ದ ಔಷದಿಯನ್ನ ಕುಡಿದಿದ್ದಾಳೆ ಎನ್ನಲಾಗುತ್ತಿದೆ .ಕುಟುಂಬದವರು ತಕ್ಷಣಕ್ಕೆ ತಾಲೂಕಿನ ಸರಕಾರಿ ಆಸ್ಪತ್ರೆಗೆ ಕರೆತಂದರು.ಅಲ್ಲಿನ ವೈದ್ಯರು ಪ್ರಾರ್ಥಮಿಕ ಚಿಕಿತ್ಸೆ ನೀಡಿ ,ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ದೊಡ್ಡಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 8 ಗಂಟೆಯ ಸುಮಾರಿಗೆ ಭೂಮಿಕಾ ಇಹಲೋಕ ತ್ಯಜಿಸಿದ್ದಾಳೆ.
ಜೀವನದಲ್ಲಿ ಎಷ್ಟೋ ಪರೀಕ್ಷೆಗಳ ಎದುರಿಸಬೇಕಾದ ಸನ್ನಿವೇಶಗಳು ಸೃಷ್ಟಿಯಾಗುತ್ತವೆ.ಅದಕ್ಕೆಲ್ಲ ಆತ್ಮಹತ್ಯೆಯೊಂದೇ ಪರಿಹಾರವಂತೂ ಅಲ್ಲ . ಬೆಳೆದು ಸಮಾಜದ ಉದ್ದಾರಕ್ಕೆ ಕೈಜೋಡಿಸಬೇಕಾದ ಮಕ್ಕಳೇ ಆತ್ಮಹತ್ಯೆಯ ಹಾದಿ ತುಳಿಯುವುದು ಮಾತ್ರ ದುರದೃಷ್ಟ .
ಶಾಲಾ ಪಠ್ಯಗಳಲ್ಲಿ ಮಕ್ಕಳ ಮನಸ್ಸನ್ನು ಗಟ್ಟಿಗೊಳಿಸುವ ,ಸೋಲುಗಳಿಗೂ ಅಂಜದೆ ಜೀವನ ನಡೆಸುವಂತಹ ಪಾಠಗಳನ್ನ ಸೇರಿಸಬೇಕು, ಶಿಕ್ಷಕರು ಸಹ ಪರೀಕ್ಷೆಗಳಿಗೂ ಮುಂಚೆ ಜೀವನ ಪಾಠವನ್ನು ಮಕ್ಕಳಿಗೆ ಬೋಧಿಸುವ ಕೆಲಸಕ್ಕೆ ಮುಂದಾಗಬೇಕು ಅನ್ನುವ ಕೂಗುಗಳು ಇಂತಹ ಘಟನೆಗಳು ನಡೆದಾಗ ಕೇಳಿಬರುತ್ತವೆ. ನಂತರದಲ್ಲಿ ನಿಂತು ಬಿಡುತ್ತವೆ.ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಯೋಚಿಸಿದಾಗ ಮಾತ್ರ ನಾವು ಭೂಮಿಕಾಳಂತಹ ಎಷ್ಟೋ ಮುಗ್ಧ ಜೀವಗಳ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತೆ .
ಅರಕಲಗೂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
No comments:
Post a Comment