ಸರಕಾರಿ ಶಾಲೆಯ ಅಭಿವೃಧ್ದಿಗೆ 1 ಲಕ್ಷ ರೂ ದೇಣಿಗೆ


ಕೊಣನೂರು : ಶತಮಾನೋತ್ಸವ ಪೂರೈಸಿರುವ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃಧ್ದಿಗಾಗಿ ಹಾಲಿ ಅಮೇರಿಕಾದಲ್ಲಿ ನೆಲೆಸಿರುವವರೊಬ್ಬರು ಉದಾರವಾಗಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊಣನೂರಿನಲ್ಲಿ  ಹಲವು ವರ್ಷಗಳ ಕಾಲ ಹಾರಂಗಿ ಇಲಾಖೆಯಲ್ಲಿ ಅಭಿಯಂತರರಾಗಿ ಕಾರ್ಯನಿರ್ವಹಿಸಿದ್ದ ಹೆಚ್. ಹೊಸಳಯ್ಯ ಅವರ ಪುತ್ರ ಪ್ರಸ್ತುತ  ಅಮೇರಿಕಾದಲ್ಲಿ ನೆಲಸಿರುವ ಮೋಹನ್ ಹೊಸಳಯ್ಯ ಅವರು ಹೆಮ್ಮೆಯ ಶತಮಾನ ಶಾಲೆಯ ಪ್ರಗತಿಯನ್ನು ನೋಡಿ ಸಂತೋಷಪಟ್ಟು, ಈ ಶಾಲೆಯಲ್ಲಿ ಓದದೆ ಇದ್ದರೂ ಸಹ ಊರಿನ ಮೇಲಿನ ಅಭಿಮಾನದಿಂದ ಒಂದು ಲಕ್ಷ ರೂಪಾಯಿಗಳ ಚೆಕ್ಕನ್ನು  ತಂದೆ ಹಾಗೂ ತಾಯಿಯವರ ನೆನಪಿನಲ್ಲಿ ನೀಡಿರುತ್ತಾರೆ.
ಅವರು ನೀಡಿದಂತಹ  ಚೆಕ್ಕನ್ನು ಮೋಹನ್ ಹೊಸಳಯ್ಯ ರವರ ಪರವಾಗಿ  ಸ್ನೇಹಿತರಾದ ಎ.ಸಿ. ಪ್ರಸನ್ನ ಹಾಗೂ ಸುಬ್ರಹ್ಮಣ್ಯರವರು ಶಾಲೆಗೆ ಆಗಮಿಸಿ ಹಳೆಯ ವಿದ್ಯಾರ್ಥಿಗಳ ವೇದಿಕೆಯ ಪದಾಧಿಕಾರಿಗಳಿಗೆ ನೀಡಿದರು.ಅವರಿಗೆ ಸಮಿತಿಯವರು ಪ್ರೀತಿ ಪೂರ್ವಕ ಧನ್ಯವಾದಗಳನ್ನು ಕೋರಿದರು. ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ವೇದಿಕೆಯ ಪದಾಧಿಕಾರಿಗಳು ಇದ್ದರು.

No comments:

Post a Comment