ಕೇರಳಾಪುರದಲ್ಲಿ ಸುಮಾರು ವರ್ಷಗಳಿಂದ ಸಾರ್ವಜನಿಕ ಸ್ಮಶಾಣವಿಲ್ಲದೇ ಪರದಾಟ,ತುರ್ತಾಗಿ ಮಾಡಲು ತಹಶೀಲ್ದಾರ್ ವೈ ಎಂ ರೇಣುಕುಮಾರ್ ಸೂಚನೆ.

ಕೇರಳಾಪುರದಲ್ಲಿ ಸುಮಾರು ವರ್ಷಗಳಿಂದ ಸಾರ್ವಜನಿಕ ಸ್ಮಶಾಣವಿಲ್ಲದೇ ಪರದಾಡುವ ಪರಿಸ್ಥಿತಿ ಬಂದಿತ್ತು. ಆದರೆ  ಕಾವೇರಿ ನದಿ ದಡದಲ್ಲೇ ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು.


ಅಲ್ಲದೇ ಪಟ್ಟಣದ ಕಸವನ್ನು ಪಂಚಾಯಿತಿಯಿಂದ ಕಾವೇರಿ ನದಿ ಪಕ್ಕದಲ್ಲಿ ಇರುವ  ದಡದಲ್ಲೇ ಸುರಿದು ಕಾವೇರಿ ನದಿ ಯನ್ನು ಕಲುಷಿತ ಆಗುತ್ತಿತ್ತು ಇವಗ ಸ.ನಂ 158ರಲ್ಲಿ ವಿಸ್ತೀರ್ಣ 2-37ರ ಪೈಕಿ 1-00ಎಕರೆ ಸ್ಮಶಾಣಕ್ಕೆ 1-00ಎಕರೆ ಕಸ ವಿಲೇವಾರಿ ಘಟಕಕ್ಕೆ ಮಾನ್ಯ ಜಿಲ್ಲಾಧೀಕಾರಿಗಳ ಆದೇಶದಂತೆ ಹಾಗೂ ಮಾನ್ಯ ತಹಶೀಲ್ದಾರ್.ವೈ.ಎಂ .ರೇಣುಕುಮಾರ್ ರವರು  ಆದೇಶ ದಿಂದಾಗಿ ಅತೀ ತುರ್ತಾಗಿ ಅಳತೆ ಮಾಡಿ ಕಡತ ತಯಾರಿಸುವಂತೆ ಸೂಚಿಸಿದ ಮೇರೆ ರಾಮನಾಥಪುರ ಹೋಬಳಿಯ ರಾಜಸ್ವನಿರೀಕ್ಷಕರಾದ ಸಿ.ಸ್ವಾಮಿ ರವರ ನೇತೃತ್ವದಲ್ಲಿ ತಾಲ್ಲೂಕು ಮೋಜಿಣಿದಾರರಾದ ಸ್ವಾಮಿ ರವರಿಂದ ಅಳತೆಮಾಡಿ ಗುರುತು ಮಾಡಲಾಯಿತು.

ಈಸಂಧರ್ಭದಲ್ಲಿ ಗ್ರಾಮಪಂಚಾಯಿತಿ ಕಾರ್ಯದರ್ಶಿ ರವಿ.ಗ್ರಾಮಸಹಾಯಕ ರಂಗಸ್ವಾಮಿ.ಹಾಜರಿದ್ದರು

No comments:

Post a Comment